ಬೆಂಗಳೂರು (ನ.16): ವೈದ್ಯರ ಮುಷ್ಕರದಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದು ರೋಗಿಗಳ ಪಾಡು ಹೇಳತೀರದಾಗಿದೆ.  ಬೆಂಗಳೂರಿನ ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ತಕ್ಷಣವೇ ಮುಷ್ಕರ ಕೈಬಿಡಿ ಎಂದು  ಸೂಚನೆ ನೀಡಿದೆ.
ಖಾಸಗಿ ವೈದ್ಯರ ಪರ ಹಿರಿಯ ವಕೀಲ ಬಸವರಾಜು ವಾದ ಮಂಡಿಸಿದ್ದಾರೆ.  ಸರ್ಕಾರ ನಾಳೆ ಮಸೂದೆ ಜಾರಿಗೊಳಿಸಲಿದೆ ಎಂದು ವಾದ ಮಂಡಿಸಿದ್ದಾರೆ.
ನಾವು ಇವತ್ತಿನ ರೋಗಿಗಳ ಬಗ್ಗೆ ಚಿಂತಿಸುತ್ತಿದ್ದೇವೆ. ಸರ್ಕಾರ ಮಾತುಕತೆಗೆ ಸಿದ್ಧ ಇದೆ ಎಂದು ಎಜಿ ಹೇಳುತ್ತಿದ್ದಾರೆ.  ಸಂಜೆ ಸಿಎಂ ಸಭೆ ಕರೆದಿದ್ದಾರೆ ಎಂದು ಎಜಿ ಹೇಳಿದ್ದಾರಲ್ಲ.?  ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಳ್ಳಲು ಮನವೊಲಿಸಿ. ಜನಸಾಮಾನ್ಯರಿಗೆ ತೊಂದರೆ ಬೇಡವೆಂದು ಕೂಡಲೇ ಮುಷ್ಕರ ನಿಲ್ಲಿಸಿ.  ಅರ್ಧ ಗಂಟೆಯಲ್ಲಿ ಮುಷ್ಕರ ನಿಲ್ಲಿಸ್ತೀರಾ..? ಎಂದು ವೈದ್ಯರ ಪರ ವಕೀಲರಿಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಮನವಿ ಮಾಡಿಕೊಂಡಿದ್ದಾರೆ.

Tagged:

0 comments:

Post a Comment